ನರ್ಸರಿಗಳು

ನಿಗಮದಲ್ಲಿ ಒಟ್ಟು 6 ಪೂರ್ಣಕಾಲಿಕ ಹಾಗೂ 2 ತಾತ್ಕಾಲಿಕ ನರ್ಸರಿಗಳಿವೆ. ಅಧಿಕ ಇಳುವರಿ ನೀಡುವ ಕಸಿ ಗೇರು ತಳಿಗಳಾದ ಉಳ್ಳಾಲ- I, ಉಳ್ಳಾಲ- III, ವೆಂಗುರ್ಲಾ – Iಗಿ, ವೆಂಗುರ್ಲಾ –ಗಿII, ಯು.ಎನ್. -50, ವೃದ್ಧಾಚಲಂ– III ಗಳನ್ನು ನಿಗಮದ ನೆಡುತೋಪುಗಳಲ್ಲಿ ನಾಟಿ ಮಾಡಲು ಹಾಗೂ ಜೊತೆಗೆ ಸಾರ್ವಜನಿಕರಿಗೆ ಮಾರಾಟ ಮಾಡಲು ಮೇಲಿನ ನರ್ಸರಿಗಳಲ್ಲಿ ಬೆಳೆಸಲಾಗುತ್ತಿದೆ. ಪ್ರತೀ ಕಸಿ ಗೇರು ಗಿಡವನ್ನು 6”x 9”ಅಳತೆಯ ಪಾಲಿಥೀನ್ ಚೀಲಗಳಲ್ಲಿ ಬೆಳೆಸಲಾಗುತ್ತಿದ್ದು, ಅದರ ಕನಿಷ್ಠ ಎತ್ತರವು 40 ಸೆ.ಮೀ. (16”) ಇರುತ್ತದೆ. ಒಳ್ಳೆಯ ಕಸುವು ಇರುವ ಆಯ್ದ ತಾಯಿ ಮರಗಳಿಂದ ಪಡೆದು ಬೆಳೆಸಿದ ಆರೋಗ್ಯವಂತ ಕಸಿ ಗೇರು ಗಿಡಗಳನ್ನು ಮಾತ್ರ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತಿದೆ. ನರ್ಸರಿಗಳು ಈ ಕೆಳಗಿನ ಸ್ಥಳದಲ್ಲಿರುತ್ತದೆ: 1. ಕುಮಟಾ ವಿಭಾಗ:
  1. ಬಡಾಳ ನರ್ಸರಿ

 2. ಕುಂದಾಪುರ ವಿಭಾಗ:
  1. ಗುಜ್ಜಾಡಿ ನರ್ಸರಿ
  2. ಸರ್ಪನಮನೆ ನರ್ಸರಿ

 3. ಪುತ್ತೂರು ವಿಭಾಗ:
  1. ಕೆರೆವಾಸೆ ನರ್ಸರಿ
  2. ಒಳಾಲು ನರ್ಸರಿ