ಮಂಡಳಿ ವರದಿ
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ
(ಕರ್ನಾಟಕ ಸರಕಾರದ ಒಂದು ಉದ್ಯಮ)
ಮಂಡಳಿ ವರದಿ
ಷೇರುದಾರರಿಗೆ,
ಮಾನ್ಯರೇ,
31-03-2019ಕ್ಕೆ ಕೊನೆಗೊಂಡ ವರ್ಷಕ್ಕೆ ಸಂಬಂಧಿಸಿದ ನಲ್ವತೊಂದ್ತನೇ ವಾರ್ಷಿಕ ವರದಿಯನ್ನು ಕಂಪೆನಿಯ ಪರಿಶೋಧಿತ ತುಲನ ಪತ್ರ, ಲಾಭ-ನಷ್ಟ ಹಾಗೂ ಲೆಕ್ಕ ಪರಿಶೋಧಕರ ವರದಿ ಹಾಗೂ ಅದಕ್ಕೆ ಉತ್ತರವನ್ನೂ ಮತ್ತು 2013 ಕಂಪೆನಿಯ ಅಧಿನಿಯಮದ ಮೇರೆಗೆ ಭಾರತದ ನಿಯಂತ್ರಣಾಧಿಕಾರಿ ಹಾಗೂ ಮಹಾ ಲೆಕ್ಕ ಪರಿಶೋಧಕರು ಕೊಡಮಾಡಿದ ಪ್ರಮಾಣ ಪತ್ರದೊಡನೆ ನಿಮ್ಮ ಮುಂದಿಡಲು ನಿಮ್ಮ ನಿರ್ದೇಶಕರಿಗೆ ಅತೀವ ಸಂತೋಷವಾಗಿದೆ.
I. ಆರ್ಥಿಕ ಫಲಿತಾಂಶ, ವ್ಯವಸ್ಥೆಯ ಪುನರ್‍ಪರಿಶೀಲನೆ ಮತ್ತು ಮುಂದಿನ ಯೋಜನೆ:
ಎ. ಆರ್ಥಿಕ ಫಲಿತಾಂಶ:
31-03-2019 ಕ್ಕೆ ಕೊನೆಗೊಳ್ಳುವ ವಿತ್ತ ವರ್ಷದಲ್ಲಿ ನಿಗಮವು ರೂ.32.66 ಲಕ್ಷ ನಿವ್ವಳ ನಷ್ಟವನ್ನು ಹೊಂದಿದೆ. ಎಲ್ಲಾ ಹೊಂದಾಣಿಕೆಗಳ ನಂತರ ಒಟ್ಟು ಸಂಚಯಿತ ನಷ್ಟವು ರೂ.68.00 ಲಕ್ಷಗಳಾಗಿದೆ.
|
ಸ್ವತಂತ್ರ |
|
ವಿವರಗಳು |
2018-19 |
2017-18 |
ಕಾರ್ಯಾಚರಣೆಗಳಿಂದ ಆದಾಯ |
8,13,40,614 |
7,72,71,087 |
ಇತರ ಆದಾಯ |
1,50,31,183 |
93,05,715 |
ಒಟ್ಟು ಆದಾಯ |
9,63,71,767 |
8,65,76,802 |
ವೆಚ್ಚಗಳು |
8,75,59,115 |
7,38,30,673 |
ಸವಕಳಿ ಲಾಭ (ನಷ್ಟ) ಮೊದಲು |
88,12,682 |
1,27,46,129 |
ಕಡಿತ: ಸವಕಳಿ |
50,81,625 |
50,01,640 |
ಲಾಭ (ನಷ್ಟ) ತೆರಿಗೆ ಮೊದಲು |
37,31,057 |
77,44,489 |
ಕಡಿತ: ಹಿಂದಿನ ಅವಧಿಯ ಖರ್ಚುಗಳು |
7,15,229 |
(70,456) |
ಕಡಿತ: ತೆರಿಗೆಗಾಗಿ ಹಂಚಿಕೆ |
11,80,152 |
11,08,442 |
ತೆರಿಗೆ ನಂತರದ ಲಾಭ (ನಷ್ಟ) |
32,66,134 |
65,65,591 |
ಪ್ರತೀ ಷೇರಿನ ಗಳಿಕೆ : ಮೂಲ |
43 |
86 |
ಬಿ. ಚಟುವಟಿಕೆ ಅಥವಾ ಕಾರ್ಯಾಚರಣೆ:
- ನಿಗಮವು ಅಧಿಕ ಇಳುವರಿ ನೀಡುವಂತಹ ಉತ್ತಮ ತಳಿಯ ಗೇರು ನೆಡುತೋಪುಗಳನ್ನು ಕಾಯ್ದಿರಿಸಲ್ಪಟ್ಟ ಅರಣ್ಯ ಪ್ರದೇಶದಲ್ಲಿ ಬೆಳೆಸುವುದು, ಹಳೆಯ ನೆಡುತೋಪುಗಳ ಸಂರಕ್ಷಣೆ ಹಾಗೂ ಅಧಿಕ ಇಳುವರಿ ನೀಡುವ ಕಸಿ ಮಾಡಿದ ಗಿಡಗಳನ್ನು ಬೆಳೆಸಿ ರೈತರಿಗೆ ಮಾರಾಟ ಮಾಡುವಂತಹ ಉತ್ತಮ ಕಾರ್ಯದಲ್ಲಿ ನಿರತವಾಗಿದೆ.
- ಪ್ರಸಕ್ತ ವರ್ಷದಲ್ಲಿ ನಿಗಮವು 1981 ರಿಂದ 1987ರಲ್ಲಿ ಐ.ಡಿ.ಎ. ವಿಶ್ವಬ್ಯಾಂಕ್‍ನ ಸಹಾಯದಿಂದ 3714 ಹೆ. ವಿಸ್ತೀರ್ಣದಲ್ಲಿ ಬೆಳೆಸಿದ ಗೇರು ನೆಡು ತೋಪುಗಳನ್ನು ಸಂರಕ್ಷಣೆ ಮಾಡಲಾಯಿತು. ಮೇಲೆ ಹೇಳಿದ 3714 ಹೆ. ಗೇರು ನೆಡುತೋಪುಗಳಲ್ಲಿ 2860.78 ಹೆ. ಭೂಮಿಯನ್ನು ಅರಣ್ಯ ಇಲಾಖೆಯಿಂದ ಗೇಣಿ ಮೇಲೆ ಪಡೆದುಕೊಳ್ಳಲಾಗಿದ್ದು ಉಳಿದದ್ದು ಕಂಪೆನಿಗೆ ಕರ್ನಾಟಕ ಸರಕಾರದಿಂದ ವರ್ಗಾಯಿಸಲಾಗಿರುವ ಈಕ್ವಿಟಿ ಪ್ರದೇಶದ ಭಾಗವಾಗಿದೆ.
- ಸಕ್ತ ವರ್ಷದಲ್ಲಿ ನಿಗಮವು 1979 ರಿಂದ 1993 ರ ವರೆಗೆ ಕಂಪೆನಿಗೆ ಈಕ್ವಿಟಿ ಶೇರು ಬಂಡವಾಳವನ್ನಾಗಿ ವರ್ಗಾಯಿಸಿದ 12724.43 ಹೆ. ವಿಸ್ತೀರ್ಣದ ಹಳೆಯ ಗೇರು ನೆಡುತೋಪುಗಳನ್ನು ಸಂರಕ್ಷಣೆ ಮಾಡಿದೆ. ಕರ್ನಾಟಕ ಸರಕಾರವು 1993ರಲ್ಲಿ ಅರಣ್ಯ ಇಲಾಖೆಯಿಂದ 12908.19 ಹೆ. ವಿಸ್ತೀರ್ಣದ ಗೇರು ನೆಡುತೋಪುಗಳನ್ನು ಕಂಪೆನಿಗೆ ಗೇಣಿ ಆಧಾರದಲ್ಲಿ ವರ್ಗಾಯಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ ನಿಗಮವು ಈ ನೆಡುತೋಪುಗಳನ್ನು ಸಂರಕ್ಷಣೆ ಮಾಡಿದೆ. 31-3-2019 ರಲ್ಲಿ ಕೊನೆಗೊಂಡಂತ ವರ್ಷದಲ್ಲಿ ಕಂಪೆನಿಯ ಒಟ್ಟು ಭೂಪ್ರದೇಶವು 25632.62 ಹೆಕ್ಟೇರು. ಈ ಭೂಭಾಗಗಳು ಕುಮಟಾ, ಕುಂದಾಪುರ, ಪುತ್ತೂರು ಹಾಗೂ ಮೂಡಬಿದ್ರೆ ವಿಭಾಗಗಳ ವಿಭಾಗೀಯ ವ್ಯವಸ್ಥಾಪಕರ ಅಧೀನದಲ್ಲಿದ್ದು, ಇದರ ಮೇಲ್ವಿಚಾರಣೆ ಹಾಗೂ ಆಡಳಿತ ಮಂಗಳೂರಿನಲ್ಲಿರುವ ಕೇಂದ್ರ ಕಚೇರಿಯಿಂದ ನಡೆಯುತ್ತಿದೆ. ಮೂಡಬಿದ್ರೆ ವಿಭಾಗವನ್ನು 183ನೇ ಮಂಡಳಿ ಸಭೆಯ ತೀರ್ಮಾನದ ಪ್ರಕಾರ 01-04-2019 ರಿಂದ ಮುಚ್ಚಲಾಗಿದೆ. ಸರ್ಕಾರಿ ಆದೇಶ ದಿನಾಂಕ 05-04-1993ರ ಪ್ರಕಾರ ಇನ್ನೂ 5937.33 ಹೆಕ್ಟೇರುಗಳಷ್ಟು ಗೇರು ನೆಡುತೋಪುಗಳು ಅರಣ್ಯ ಇಲಾಖೆಯಿಂದ ನಿಗಮಕ್ಕೆ ವರ್ಗಾವಣೆ ಆಗಬೇಕಷ್ಟೆ.
1992-93 ರಿಂದ 2018-2019 ರ ವರೆಗಿನ ಅವಧಿಯಲ್ಲಿ ಖಾಲಿ ಜಾಗವಿರುವ ಹಳೆ ಗೇರು ನೆಡುತೋಪುಗಳಲ್ಲಿ 13230.80 ಹೆಕ್ಟೇರು ವಿಸ್ತೀರ್ಣದಲ್ಲಿ ಹೊಸದಾಗಿ ಅಧಿಕ ಇಳುವರಿ ನೀಡುವ ಗೇರು ಗಿಡಗÀಳನ್ನು ಯಶಸ್ವಿಯಾಗಿ ಬೆಳೆಸಿದ್ದು, ವರದಿಯ ವರ್ಷದಲ್ಲಿ ಅವುಗಳನ್ನು ಸಂರಕ್ಷಣೆ ಮಾಡಲಾಯಿತು. ಕೇಂದ್ರ ಸರಕಾರವು ರೂ.24.00 ಲಕ್ಷ ಹಣದ ಅನುದಾನವನ್ನು ಅಧಿಕ ಇಳುವರಿ ನೀಡುವ ನೆಡುತೋಪುಗಳ ಬೆಳೆಸುವಿಕೆ ಹಾಗೂ ಪೋಷಣೆಗೆ ಪ್ರಸಕ್ತ ವರ್ಷ ಗೇರು ಮತ್ತು ಕೊಕ್ಕೊ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿ, ಇವರ ಮುಖಾಂತರ ಬಿಡುಗಡೆ ಮಾಡಿರುತ್ತದೆ. ಈ ಅನುದಾನದ ಹೊರತಾಗಿ, ಅಸ್ತಿತ್ವದಲ್ಲಿರುವ 500 ಹೆ. ಹೊಸ ಗೇರು ನೆಡುತೋಪುಗಳನ್ನು ಬೆಳೆಸಲು, ಅಸ್ತಿತ್ವದಲ್ಲಿರುವ ಹಳೆಯ ಗೇರು ನೆಡುತೋಪುಗಳ ಪುನಶ್ಚೇತನಕ್ಕಾಗಿ, ಗೇರು ನರ್ಸರಿಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಮತ್ತು ರೈತರ ತರಬೇತಿಗಾಗಿ ಮೊದಲ ಮಹಡಿಯ ನಿರ್ಮಾಣಕ್ಕಾಗಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ (ಆರ್‍ಕೆವಿವೈ) ಅಡಿಯಲ್ಲಿ ಕೇಂದ್ರ ಸರಕಾರದಿಂದ ರೂ.4,27,00,000/- ಅನುದಾನವನ್ನು ಸ್ವೀಕರಿಸಲಾಗಿದೆ. - ಪ್ರಸಕ್ತ ವರ್ಷ 2018-2019, ನಿಗಮವು ಪುತ್ತೂರು, ಕುಂದಾಪುರ, ಕುಮಟಾ ಹಾಗೂ ಮೂಡಬಿದ್ರೆ ವಿಭಾಗದಲ್ಲಿರುವ ಒಟ್ಟು 25,632.62 ಹೆಕ್ಟೇರು ಗೇರು ನೆಡುತೋಪುಗಳನ್ನು ಇ-ಹರಾಜು ಮತ್ತು ಟೆಂಡರು ಮೂಲಕ ವಿಕ್ರಯಿಸಲು ಕ್ರಮ ಕೈಗೊಂಡಿರುತ್ತದೆ. ಈ ಪ್ರಕ್ರಿಯೆಯಲ್ಲಿ ಕೈಗೊಂಡ ಮಾರಾಟದಿಂದ ಪ್ರಸಕ್ತ ವರ್ಷ ಒಟ್ಟು ರೂ.811.94 ಲಕ್ಷ ಆದಾಯ ಬಂದಿರುತ್ತದೆ.
ಸಿ. ಮುಂದಿನ ಯೋಜನೆಗಳು:
ನಿಗಮದಲ್ಲಿರುವ ನೆಡುತೋಪುಗಳು ಹಳೆಯದಾಗಿದ್ದು ಮರಗಳಲ್ಲಿ ಇಳುವರಿ ಕಮ್ಮಿಯಾಗಿದೆ ಹಾಗೂ ಸಾಕಷ್ಟು ಪ್ರದೇಶವು ಲಭ್ಯವಿದೆ. ಈ ಹಳೆಯ ಗಿಡಗಳನ್ನು ತೆಗೆದು ಉತ್ತವi ತಳಿಯ ಗಿಡಗಳನ್ನು ನೆಡಬೇಕಾಗಿದೆ. ಇಂದಿನ ವರೆಗೆ ನಿಗಮವು ಉತ್ತಮ ಇಳುವರಿ ನೀಡುವ ಗೇರುಗಿಡಗಳನ್ನು ನೆಟ್ಟು 1981 ರಿಂದ 1987 ರ ವರೆಗೆ ಒಟ್ಟು 3714 ಹೆಕ್ಟೇರು ಗೇರು ನೆಡುತೋಪುಗಳನ್ನು ಹಾಗೂ ಅಧಿಕ ಇಳುವರಿ ನೀಡುವ 13,230.80 ಹೆಕ್ಟೇರು ನೆಡುತೋಪುಗಳನ್ನು 1992-93 ರಿಂದ 2018-19ರ ವರೆಗೆ ಬೆಳೆಸಿರುತ್ತದೆ. ಇದಲ್ಲದೆ ಇಳುವರಿ ಹೆಚ್ಚಿಸಲು ಕ್ಲೋನಲ್ ಆರ್ಚ್‍ರ್ಡ್‍ಗಳನ್ನು ಕೂಡ ಸಂರಕ್ಷಣೆ ಮಾಡಿರುತ್ತದೆ. ನಿಗಮವು ಆಂತರಿಕ ಸಂಪನ್ಮೂಲಗಳಿಂದ 200 ಹೆಕ್ಟೇರಿನಲ್ಲಿ ಹೊಸ ಗೇರು ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು, 2019 ರ ಮಳೆಗಾಲದಲ್ಲಿ 1100 ಹೆ. ಪ್ರದೇಶದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ (ಆರ್‍ಕೆವಿವೈ) ಅನುದಾನದೊಂದಿಗೆ ಪುನಶ್ಚೇತನ ಕಾರ್ಯಕ್ರಮವನ್ನು ಕೈಗೊಳ್ಳಲಿದೆ. ಮೇಲಿನವುಗಳನ್ನು ಹೊರತುಪಡಿಸಿ, ಆರ್‍ಕೆವಿವೈ ಯೋಜನೆಯಡಿ ಮಣ್ಣಿನ ಮತ್ತು ನೀರಿನ ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗುವುದು ಮತ್ತು 1ನೇ ಮಹಡಿಯ ಮುಖ್ಯ ಕಛೇರಿ ಕಟ್ಟಡದಲ್ಲಿ ಬೀಜ ಸಂಗ್ರಹಣಾ ಶೆಡ್ ನಿರ್ಮಿಸಲಾಗುವುದು.
ಹೀಗಾಗಿ, ಅಧಿಕ ಇಳುವರಿ ನೀಡುವ ನೆಡುತೋಪುಗಳಿಂದ, ಗೇರು ಬೆಳೆಯನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಲು ಕೆ.ಸಿ.ಡಿ.ಸಿ. ಗೆ ಹಣಕಾಸಿನ ನೆರವು ಬೇಕಾಗುತ್ತದೆ.
II.ಲಾಭಾಂಶ:
ಪ್ರಸಕ್ತ ವರ್ಷದಲ್ಲಿ ಯಾವುದೇ ಲಾಭಾಂಶವನ್ನು ಘೋಷಿಸಿಲ್ಲ.
III. ಹಕ್ಕು ಸಾಧಿಸದ ಲಾಭಾಂಶವನ್ನು ಇನ್‍ವೆಸ್ಟರ್ ಎಜ್ಯುಕೇಷನ್ ಎಂಡ್ ಪ್ರೊಟೆಕ್ಷನ್ ಫಂಡ್‍ಗೆ ವರ್ಗಾವಣೆ:
ಕಂಪೆನಿ ಕಾಯಿದೆ 2013ರ ಸೆಕ್ಷನ್ 125(2) ರಲ್ಲಿ ಅವಕಾಶ ಕಲ್ಪಿಸಿದಂತೆ ಕಳೆದ ವರ್ಷದಲ್ಲಿ ಈ ನಿಗಮದಿಂದ ಲಾಭಾಂಶವನ್ನು ಪ್ರಕಟಣೆ ಹಾಗೂ ಪಾವತಿ ಮಾಡಿಲ್ಲದಿರುವುದರಿಂದ ಅನ್ವಯಿಸುವುದಿಲ್ಲ.
IV. ಆರ್ಥಿಕ ವ್ಯವಸ್ಥೆ:
ಪ್ರಸಕ್ತ ಸಾಲಿನಲ್ಲಿ ನಿಗಮವು ತನ್ನ ಹೆಚ್ಚಿನ ಬ್ಯಾಂಕು ವ್ಯವಹಾರಗಳನ್ನು ತನ್ನಲ್ಲಿರುವ ಹಣವನ್ನು ಹೆಚ್ಚಿನ ರೀತಿಯಲ್ಲಿ ಉಪಯೋಗ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ ಮುಂದುವರೆಸಿದೆ.
V. ಈ ವರದಿಯ ದಿನಾಂಕ ಮತ್ತು ವಿತ್ತ ವರ್ಷದ ಕೊನೆಗೊಳ್ಳುವುದರ ಮಧ್ಯದಲ್ಲಿ ನಿಗಮದ ವಿತ್ತೀಯ ಸ್ಥಿತಿಯಲ್ಲಿ ಅದಂತಹ ಮಹತ್ವದ ಬದಲಾವಣೆ ವ್ಯತ್ಯಾಸ ಹಾಗೂ ಬದ್ಧತೆಗಳು ಯಾವುದಾದರೂ ಇದ್ದಲ್ಲಿ:
ನಿಗಮದ ವಿತ್ತೀಯ ಸ್ಥಿತಿಯನ್ನು ಯಾವುದೇ ಮಹತ್ವದ ಬದಲಾವಣೆ ಹಾಗೂ ಬದ್ಧತೆಗಳು ಈ ವಿತ್ತೀಯ ವರ್ಷದ ಕೊನೆಯಿಂದ ಈ ವರದಿಯ ದಿನಾಂಕದ ಮಧ್ಯದಲ್ಲಿ ಯಾವುದು ಇರುವುದಿಲ್ಲ.
VI. ಶಕ್ತಿ ಸಂರಕ್ಷಣೆ, ತಂತ್ರಜ್ಞಾನ ಅಳವಡಿಸುವಿಕೆ, ವಿದೇಶಿ ವಿನಿಮಯ ಗಳಿಕೆ ಹಾಗೂ ಹೊರಹರಿವು:
ಕಂಪೆನಿ ಕಾಯ್ದೆ 2013 ರ ಸೆಕ್ಷನ್ 134(3)(ಎಂ) ಹಾಗೂ ಕಂಪೆನಿ ನಿಯಮ (ಲೆಕ್ಕ)2014 ಕಾಯ್ದೆ 8 (3) ರ ಜೊತೆಗೆ ಓದಿದಂತೆ ಈ ನಿಗಮವು ಗೇರು ನೆಡುತೋಪುಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಹಾಗೂ ಇದಕ್ಕೆ ಸಂಬಂದಿಸಿದಂತೆ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವುದರಿಂದ ಶಕ್ತಿ ಸಂರಕ್ಷಣೆ, ತಂತ್ರಜ್ಞಾನ ಅಳವಡಿಸುವಿಕೆ ಹಾಗೂ ವಿದೇಶಿ ವಿನಿಮಯದ ಒಳ ಹರಿವು ಹಾಗೂ ಹೊರ ಹರಿವಿನ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ.
ಆದರೆ, ಶಕ್ತಿ ಸಂರಕ್ಷಣೆ, ಮತ್ತು ತಂತ್ರಜ್ಞಾನ ಅಳವಡಿಸುವಿಕೆಗೆ ಸಂಬಂದಿಸಿದಂತೆ ನಿಗಮವು ಆಡಳಿತದ ವೇಗ ಹಾಗೂ ಕಾರ್ಯ ಸಮರ್ಥತೆಯನ್ನು ಹೆಚ್ಚಿಸಲು ಕೇಂದ್ರ ಕಛೇರಿ ಹಾಗೂ ಎಲ್ಲಾ ವಿಭಾಗೀಯ ಕಛೇರಿಗಳಲ್ಲಿ ಗಣಕಯಂತ್ರಗಳನ್ನು ಅಳವಡಿಸಿ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಕೆಲಸದಲ್ಲಿ ಮಾಹಿತಿ ತಂತ್ರಜ್ಞಾನವನ್ನು ಸೂಕ್ತವಾಗಿ ಉಪಯೋಗಿಸಿಕೊಂಡು ನಿಗಮವು ತನ್ನ ಮುಖ್ಯ ಆದಾಯದ ಮೂಲವಾದ ಗೇರು ಮಾರಾಟವನ್ನು ಇ ವೇದಿಕೆಯ ಮೂಲಕ ಇ-ಹರಾಜಿನಲ್ಲಿ ಮಾಡುತ್ತಿದೆ..
VII. ನಿಗಮದ ಸಾಮಾಜಿಕ ಭಾದ್ಯತೆಗಳ ಮೇಲೆ ಕಾರ್ಯ ನೀತಿಗಳನ್ನು ಅಭಿವೃದ್ಧಿಪಡಿಸಿಕೊಂಡ ಹಾಗೂ ಅಳವಡಿಸಿಕೊಂಡ ಬಗ್ಗೆ ವಿವರಗಳು:
ಈ ಪರಿಶೀಲನೆಯು ಪ್ರಸಕ್ತ ವರ್ಷದಲ್ಲಿ ನಿಗಮಕ್ಕೆ ಅನ್ವಯಿಸುವುದಿಲ್ಲ.
VIII. ಕಂಪೆನಿ ಕಾಯ್ದೆ 2013 ರ ಸೆಕ್ಷನ್ 186 ರ ಅಡಿಯಲ್ಲಿ ಮಾಡಿದಂತಹ ಸಾಲಗಳು, ಹೊಣೆಗಳು ಅಥವಾ ಹೂಡಿಕೆಗಳ ಬಗ್ಗೆ ವಿವರ:
ಸೆಕ್ಷನ್ 186ರ ಅಡಿಯಲ್ಲಿ ಮಾಡಿದ ಸಾಲಗಳು, ಹೊಣೆಗಳು ಅಥವಾ ಹೂಡಿಕೆಗಳು ಯಾವುದು ಇರುವುದಿಲ್ಲ.
IX. ಸಂಬಂಧೀ ಭಾಗೀದಾರರೊಡನೆ ಕರಾರು ಅಥವಾ ವ್ಯವಸ್ಥೆಗಳನ್ನು ಮಾಡಿದ ಬಗ್ಗೆ ವಿವರಗಳು:
ಸೆಕ್ಷನ್ 188ಕ್ಕೆ ಅನುಸಾರವಾಗಿ ಸಂಬಂಧೀ ಭಾಗಿದಾರರೊಡನೆ ಕರಾರು ಅಥವಾ ವ್ಯವಸ್ಥೆಗಳನ್ನು ಮಾಡಿದ ಬಗ್ಗೆ ವಿವರಗಳನ್ನು ಒದಗಿದಲು ಏನೂ ಇರುವುದಿಲ್ಲ.
X. ಲೆಕ್ಕ ಪರಿಶೋಧಕರು ಹಾಗೂ ವೃತ್ತಿನಿರತ ಕಂಪೆನಿ ಕಾರ್ಯದರ್ಶಿ ನೀಡಿದ ವರದಿಯಲ್ಲಿ ಹೇಳಿದಂತಹ ಯೋಗ್ಯತೆಗಳು, ಮೀಸಲಾತಿಗಳು ಅಥವಾ ಪ್ರತಿಕೂಲ ಅಭಿಪ್ರಾಯ ಅಥವಾ ಅಂಗೀಕರಿಸಲ್ಪಡದ ವಿಚಾರಗಳಿಗೆ ವಿವರಣೆ ಅಥವಾ ಹೇಳಿಕೆಗಳು:
ಶಾಸನಬದ್ಧ ಲೆಕ್ಕ ಪರಿಶೋಧಕರು ಹಾಗೂ ಭಾರತದ ನಿಯಂತ್ರಣಾಧಿಕಾರಿ ಹಾಗೂ ಮಹಾಲೆಕ್ಕ ಪರಿಶೋಧಕರ ಅವಲೋಕನೆಗೆ ಕೊಟ್ಟ ಉತ್ತರಗಳನ್ನು ಅನುಬಂಧವಾಗಿ ಕೊಟ್ಟಿದ್ದು ಈ ವರದಿಯ ಭಾಗವಾಗಿ ಓದಿಕೊಳ್ಳಬಹುದು.
XI. ಲೆಕ್ಕ ಪತ್ರದ ಪುನರ್‍ಪರಿಶೀಲನೆ:
ಕೇಂದ್ರ ಸರಕಾರದ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್ ಅವರ ನಾಮಿನಿ, ಅಕೌಂಟೆಂಟ್ ಜನರಲ್ ಅವರು 31-03-2019ಕ್ಕೆ ಕೊನೆಗೊಂಡ ವಿತ್ತವರ್ಷದ ಲೆಕ್ಕಪತ್ರಗಳ ಮೇಲೆ ನೀಡಿದ ಟಿಪ್ಪಣಿಗಳನ್ನು ಅನುಬಂಧದಲ್ಲಿ ನೀಡಲಾಗಿದ್ದು ಅದನ್ನು ವರದಿಯ ಭಾಗವಾಗಿ ಓದಿಕೊಳ್ಳಬಹುದಾಗಿದೆ.
XII. ನಿರ್ದೇಶಕರ ನೇಮಕಾತಿ, ಸಂಭಾವನೆ ಪಾವತಿ ಮತ್ತು ಅವರ ಕರ್ತವ್ಯಗಳನ್ನು ನಿಭಾಯಿಸುವ ಬಗ್ಗೆ ನಿಗಮದ ನೀತಿ:
ಸೆಕ್ಷನ್ 178(1) ರ ಅವಕಾಶದಂತೆ ನಾಮ ನಿರ್ದೇಶನ ಮತ್ತು ಸಂಭಾವನೆ ಸಮಿತಿ ರಚನೆ ಈ ನಿಗಮಕ್ಕೆ ಅನ್ವಯಿಸುವುದಿಲ್ಲ.
XIII. ವಾರ್ಷಿಕ ವರದಿ:
ಸೆಕ್ಷನ್ 92 ನ್ನು ಕಂಪೆನಿಗಳು (ಮ್ಯಾನೇಜ್‍ಮೆಂಟ್ ಮತ್ತು ಅಡ್‍ಮಿನಿಸ್ಟ್ರೇಷನ್) ಕಾಯ್ದೆ 2014 ನಿಯಮ 12ರ ಜೊತೆಗೆ ಓದಿದಂತೆ ವಾರ್ಷಿಕ ವರದಿಯ ಉದ್ರತ ಪ್ರತಿಯನ್ನು ಅನುಬಂಧ-ಡಿ ಯಲ್ಲಿ ಒದಗಿಸಲಾಗಿದೆ ಹಾಗೂ ಈ ವರದಿಗೆ ಲಗ್ತೀಕರಿಸಲಾಗಿದೆ.
XIV.ಪ್ರಸಕ್ತ ವರ್ಷದಲ್ಲಿ ನಡೆದ ಮಂಡಳಿ ಸಭೆಗಳ ಸಂಖ್ಯೆ ಮತ್ತು ಪರಿಶೀಲನೆ:
ನಿಗಮವು 02-06-2018, 07-08-2018, 21-09-2018, 17-11-2018 ಮತ್ತು 13-02-2019 ಕ್ಕೆ ಐದು ಮಂಡಳಿ ಸಭೆಗಳನ್ನು ಪ್ರಸಕ್ತ ವರ್ಷದಲ್ಲಿ ನಡೆಸಲಾಗಿದೆ.
XV. ನಿರ್ದೇಶಕರ ಜವಾಬ್ದಾರಿ ಹೇಳಿಕೆ:
ಕಂಪನಿಯ ನಿಯಮದ 2013 ಕಾಯಿದೆಯ 134(5) ಪರಿಚ್ಛೇದದ ಪ್ರಕಾರ, ನಿರ್ದೇಶಕರು ಹೇಳುವುದೇನೆಂದರೆ,
ಎ)ವಾರ್ಷಿಕ ಲೆಕ್ಕಪತ್ರಗಳನ್ನು ತಯಾರಿಸುವಲ್ಲಿ ಸಂಬಂಧಪಟ್ಟ ನಿರ್ದಿಷ್ಟ ಲೆಕ್ಕಮಾನಗಳನ್ನು ಮುಖ್ಯಪಟ್ಟ ವಿಷಯಾಂತರಗಳಿಗೆ ಸೂಕ್ತ ವಿವರಣೆಯೊಂದಿಗೆ ಅನುಸರಿಸಲಾಗಿದೆ.
ಬಿ)ಲೆಕ್ಕ ಕಾರ್ಯನೀತಿಗಳನ್ನು ಆರಿಸಿ ಅದನ್ನು ಏಕರೂಪತೆಯಿಂದ ಉಪಯೋಗಿಸಿ ಮತ್ತು ಆ ಬಗ್ಗೆ ವಿಮರ್ಶಿಸಿ ಅದರ ಯುಕ್ತಾಯುಕ್ತತೆಯನ್ನು ನೋಡಿ ಆ ಮೂಲಕ ವರ್ಷದ ಕೊನೆಗೆ ಕಂಪೆನಿಯ ಪ್ರಾಮಾಣಿಕತೆಯ ಬಗ್ಗೆ ಹಾಗೂ ಲಾಭದ ಬಗ್ಗೆ ಕೊಡುವ ವರದಿಯು ಸರಿ ಎಂದು ಹೇಳುತ್ತದೆ.
ಸಿ) ನಿಗಮದ ನಿರ್ದೇಶಕರು ನಿಗಮದ ಲೆಕ್ಕ ಪತ್ರಗಳು, ಸೊತ್ತುಗಳ ಸಂರಕ್ಷಣೆ ಮಾಡುವ ಹಾಗೂ ಮೋಸ ಹಾಗೂ ಇನ್ನಿತರ ಅವ್ಯವಸ್ಥೆಯನ್ನು ತಡೆಯುವಲ್ಲಿ ಹಾಗೂ ಕಂಡುಹಿಡಿಯುವಲ್ಲಿ ಸರಿಯಾದ ಹಾಗೂ ಬೇಕಾದಷ್ಟು ಜಾಗ್ರತೆಯನ್ನು ವಹಿಸಿರುತ್ತಾರೆ.
ಡಿ)ನಿರ್ದೇಶಕರು ವಿತ್ತ ವರ್ಷದ ವಾರ್ಷಿಕ ಲೆಕ್ಕ ಪತ್ರಗಳನ್ನು ನಿಗಮವು ಒಂದು ಮುಂದುವರಿಯುತ್ತಿರುವ ವ್ಯಾಪಾರಿ ಸಂಸ್ಥೆ ಎಂಬ ಮೂಲತತ್ವದಿಂದ ತಯಾರಿಸುತ್ತದೆ.
ಇ)ನಿರ್ದೇಶಕರು ಸೂಕ್ತ ಕ್ರಮವನ್ನು ಅಳವಡಿಸಿ ಅನ್ವಯವಾಗುವ ಕಾನೂನಿನ ಎಲ್ಲ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಮಾಡಿ ಈ ಪದ್ಧತಿ ಸರಿಯಾಗಿ ಮತ್ತು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದೆ.
XVI.ಅಂಗಸಂಸ್ಥೆ, ಜಂಟಿ ಮತ್ತು ಸಹವರ್ತಿ ಸಂಸ್ಥೆಗಳು:
ಅಂಗಸಂಸ್ಥೆ, ಜಂಟಿ ಮತ್ತು ಸಹವರ್ತಿ ಸಂಸ್ಥೆಗಳ ಹಣಕಾಸಿನ ವಿವರಗಳು - ಇಲ್ಲ.
XVII. ಠೇವಣಿ:
ಕಂಪೆನಿ ಪ್ರಸ್ತುತ ಪರಿಶೀಲನಾ ವರ್ಷದಲ್ಲಿ ಯಾವುದೇ ಠೇವಣಿಯನ್ನು ಸ್ವೀಕರಿಸಿಲ್ಲ ಅಥವಾ ನವೀಕರಿಸಿಲ್ಲ.
XVIII. ನಿರ್ದೇಶಕರುಗಳ ಮಂಡಳಿ:
ಹಿಂದಿನ ವರದಿಯ ದಿನಾಂಕ, ಅಂದರೆ 04-09-2018 ರಿಂದ ನಿರ್ದೇಶಕರ ಮಂಡಳಿಯಲ್ಲಿ ಈ ಕೆಳಕಂಡಂತೆ ಬದಲಾವಣೆಗಳಾಗಿವೆ.
ಕರ್ನಾಟಕ ಸರಕಾರವು ಪತ್ರ ಸಂಖ್ಯೆ ಈಇಇ 51 ಈPಅ 2018 ದಿನಾಂಕ 30-07-2019 ರಲ್ಲಿ ಪ್ರಧಾನ ಕಾರ್ಯದರ್ಶಿ(ಅರಣ್ಯ), ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಇವರನ್ನು ನಿಗಮದ ಅಧ್ಯಕ್ಷರು ಹಾಗೂ ನಿರ್ದೇಶಕರನ್ನಾಗಿ ಮಾನ್ಯ ಅರಣ್ಯ ಸಚಿವರು ಇವರ ಬದಲಿಗೆ ನೇಮಿಸಿದೆ.
ಈ ವರದಿಯ ದಿನದಂದು ಕರ್ನಾಟಕ ಸರಕಾರ ಹಾಗೂ ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ನಿರ್ದೇಶಕರುಗಳು ಈ ಕೆಳಗಿನಂತಿರುವರು.
ಕರ್ನಾಟಕ ಸರಕಾರವನ್ನು ಪ್ರತಿನಿಧಿಸುವ ನಿರ್ದೇಶಕರು::
- ಪ್ರಧಾನ ಕಾರ್ಯದರ್ಶಿ(ಅರಣ್ಯ), ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ. ಅಧ್ಯಕ್ಷರು.
- ಶ್ರೀ ಪ್ರಕಾಶ್ ಎಸ್. ನೆಟಾಲ್ಕರ್, ಭಾ.ಅ.ಸೇ., ವ್ಯವಸ್ಥಾಪಕ ನಿರ್ದೇಶಕರು.
- ಉಪ ಕಾರ್ಯದರ್ಶಿ (ತಾಂತ್ರಿಕ), sಸಾರ್ವಜನಿಕ ಉದ್ದಿಮೆಗಳ ಇಲಾಖೆ, ಕರ್ನಾಟಕ ಸರಕಾರ.
ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ನಿರ್ದೇಶಕರು :
- ಶ್ರೀ ವೆಂಕಟೇಶ ಎನ್. ಹುಬ್ಬಳ್ಳಿ, ನಿರ್ದೇಶಕರು.
- ಡಾ|| ಎನ್. ಕೆ. ಪಟ್ಲೆ, ನಿರ್ದೇಶಕರು.
- ಶ್ರೀ. ಅವಿನಾಶ್ ಟಿ.ಜೆ., ನಿರ್ದೇಶಕರು.
- ಶ್ರೀ. ಪ್ರಕಾಶ್ ಕಲ್ಭಾವಿ, ನಿರ್ದೇಶಕರು.
XIX.ಸ್ವತಂತ್ರ ನಿರ್ದೇಶಕರ ಘೋಷಣೆ:
ಸ್ವತಂತ್ರ ನಿರ್ದೇಶಕರ ನೇಮಕಕ್ಕೆ ಸಂಬಂದಿಸಿದ ಕಂಪೆನಿ ಕಾಯಿದೆ ಸೆಕ್ಷನ್ 149 ನಿಗಮಕ್ಕೆ ಅನ್ವಯಿಸುವುದಿಲ್ಲ.
XX. ಶಾಸನಬದ್ಧ ಲೆಕ್ಕಪರಿಶೋಧಕರು:
2018-19 ನೇ ವಿತ್ತ ವರ್ಷಕ್ಕೆ ಶ್ರೀ. ಶಿವ ಕುಮಾರ್, ಲೆಕ್ಕ ಪರಿಶೋಧಕರು, ಮಂಗಳೂರು, ಇವರನ್ನು 12,500/- ರೂ.ಗಳ ಒಟ್ಟು ಸಂಭಾವನೆ ಮತ್ತು ಇತರ ಖರ್ಚುಗಳನ್ನು ನೀಡುವ ಶರತ್ತಿನಲ್ಲಿ ಕಂಪನಿಯ ಆಂತರಿಕ ಲೆಕ್ಕ ಪರಿಶೋಧನೆ ನಡೆಸಲು ನೇಮಿಸಲಾಗಿತ್ತು.
31-03-2019 ಕ್ಕೆ ಕೊನೆಗೊಂಡ ವಿತ್ತ ವರ್ಷದ ಲೆಕ್ಕಗಳನ್ನು ಪರಿಶೋಧಿಸಲು ಭಾರತದ ನಿಯಂತ್ರಣಾಧಿಕಾರಿ ಹಾಗೂ ಮಹಾಲೇಖಪಾಲರಿಂದ ಮೆ| ಎಮ್. ರಾಜೇಶ್ ಕಿಣಿ ಎಂಡ್ ಕೋ, ಚಾರ್ಟರ್ಡ್ ಅಕೌಂಟೆಂಟ್ಸ್, ಮಂಗಳೂರು ಅವರನ್ನು ಶಾಸನ ಬದ್ಧ ಲೆಕ್ಕ ಪರಿಶೋಧಕರಾಗಿ ನೇಮಿಸಲಾಗಿದೆ.
2013 ಕಂಪನಿ ಕಾಯ್ದೆಯನ್ವಯ 31-03-2020 ಕ್ಕೆ ಕೊನೆಗೊಳ್ಳುವ ವಿತ್ತ ವರ್ಷಕ್ಕೆ ನಮ್ಮ ನಿಗಮದಂತಹ ಸರಕಾರಿ ಕಂಪನಿಗಳಿಗೆ ಶಾಸನ ಬದ್ಧ ಲೆಕ್ಕ ಪರಿಶೋಧಕರನ್ನು ನೇಮಿಸುವ ಅಧಿಕಾರವನ್ನು ಭಾರತದ ನಿಯಂತ್ರಣಾಧಿಕಾರಿ ಹಾಗೂ ಮಹಾಲೇಖಪಾಲರು ಹೊಂದಿರುತ್ತಾರೆ.
XXI. ಆಡಿಟ್ ಸಂಯೋಜನೆ ಮತ್ತು ಜಾಗೃತ ಸಮಿತಿಯ ವಿವರ:
2013 ರ ಕಂಪೆನಿ ಕಾಯಿದೆ ಸೆಕ್ಷನ್ 177 ರ ನಿಯಮಾವಳಿ 6 ಮತ್ತು 7 (ಮಂಡಳಿ ಸಭೆ ಮತ್ತು ಅಧಿಕಾರ) ನಿಗಮಕ್ಕೆ ಅನ್ವುಸುವುದಿಲ್ಲ.
XXII. ಷೇರುಗಳು:
ಎ) ಭದ್ರತಾ ಪತ್ರ ಮರು ಖರೀದಿ:
ಪ್ರಸ್ತುತ ವರ್ಷದಲ್ಲಿ ಕಂಪೆನಿಯು ಯಾವುದೇ ಭದ್ರತಾ ಪತ್ರಗಳನ್ನು ಮರು ಖರೀದಿಸಿಲ್ಲ.
ಸ್ವೆಟ್ ಇಕ್ವಿಟಿ:
ಪ್ರಸ್ತುತ ವರ್ಷದಲ್ಲಿ ಕಂಪೆನಿಯು ಯಾವುದೇ ಸ್ವೆಟ್ ಇಕ್ವಿಟಿಯನ್ನು ಬಿಡುಗಡೆ ಮಾಡಿಲ್ಲ.
ಸಿ) ಬೋನಸ್ ಷೇರುಗಳು:
ಪ್ರಸ್ತುತ ವರ್ಷದಲ್ಲಿ ಕಂಪೆನಿಯು ಯಾವುದೇ ಬೋನಸ್ ಷೇರುಗಳನ್ನು ಬಿಡುಗಡೆಗೊಳಿಸಿಲ್ಲ.
ಡಿ) ಕಾರ್ಮಿಕರ ಷೇರು ಆಯ್ಕೆ ಯೋಜನೆ:
ಕಂಪೆನಿಯು ನೌಕರರಿಗೆ ಯಾವುದೇ ಷೇರು ಆಯ್ಕೆಗೆ ಅವಕಾಶ ಕೊಟ್ಟಿಲ್ಲ.
ವರದಿ ವರ್ಷದಲ್ಲಿ ಆಡಳಿತ ಮಂಡಳಿ ಮತ್ತು ನೌಕರ ವೃಂದದ ನಡುವಣ ಸಂಬಂಧವು ಸೌಹಾರ್ದಯುತವಾಗಿತ್ತು.
XXIII. ಕರ್ನಾಟಕ ಸರಕಾರಕ್ಕೆ ಆರ್ಥಿಕ ಲಾಭ:
ಪ್ರಸ್ತುತ ಸಾಲಿನಲ್ಲಿ ಕಂಪೆನಿಯು ರೂ.42,82,411.87 ಜಿ.ಎಸ್.ಟಿ. ಮತ್ತು ರೂ.64,95,497/- ಅರಣ್ಯ ಅಭಿವೃದ್ಧಿ ತೆರಿಗೆಯನ್ನು ಪಾವತಿ ಮಾಡಿರುತ್ತದೆ.
XXIV.ಮಾಹಿತಿ ಹಕ್ಕನ್ನು ಅನುಷ್ಠಾನಗೊಳಿಸುವಿಕೆ:
ಸರಕಾರದ ಮಾರ್ಗಸೂಚಿಗಳ ಪ್ರಕಾರ, ನಿಗಮವು ಮಾಹಿತಿ ಹಕ್ಕನ್ನು ಯಶಸ್ವಿಯಾಗಿ ಅನುಷ್ಠಾಠನಗೊಳಿಸಿದೆ.
XXV. ಅಭಿನಂದನೆಗಳು:
ನಿಗಮದ ನಿರ್ದೇಶಕರು ಕರ್ನಾಟಕ ರಾಜ್ಯ ಸರಕಾರ, ಕೇಂದ್ರ ಸರಕಾರ, ಗೇರುಬೀಜ ಹಾಗೂ ಕೊಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿ, ಗೇರು ಸಂಶೋಧನ ನಿರ್ದೇಶನಾಲಯ, ಪುತ್ತೂರು ಮತ್ತು ಕರ್ನಾಟಕ ಅರಣ್ಯ ಇಲಾಖೆ ಹಾಗೂ ನಿಗಮದ ಚಟುವಟಿಕೆಗಳಲ್ಲಿ ಸಹಕರಿಸುತ್ತಿರುವ ಇತರ ಎಲ್ಲರಿಗೂ ಅವರ ನಿರಂತರ ಬೆಂಬಲಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಬಯಸುತ್ತೇವೆ. ಆಂತರಿಕ ಲೆಕ್ಕ ಪರಿಶೋಧಕರು, ಶಾಸನಬದ್ಧ ಲೆಕ್ಕ ಪರಿಶೋಧಕರು, ಕಂಪ್ಪ್ರೋಲರ್ ಆಂಡ್ ಆಡಿಟರ್ ಜನರಲ್ ಅವರ ನಾಮಿನಿ ಅಕೌಂಟೆಂಟ್ ಜನರಲ್ ಹಾಗೂ ತಮ್ಮ ಸಹಕಾರವನ್ನು ಮುಂದುವರೆಸಿಕೊಂಡು ಬರುತ್ತಿರುವ ವಿವಿಧ ತಜ್ಞರು ಮತ್ತು ಸಲಹೆಗಾರರನ್ನೂ ನಾವು ಅಭಿನಂದಿಸುತ್ತಿದ್ದೇವೆ.
ನಿಗಮದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಹಾಗೂ ನೌಕರರ ವಿಧೇಯತೆ ಹಾಗೂ ಸಹಕಾರಗಳನ್ನು ನಿಮ್ಮ ನಿರ್ದೇಶಕರು ಮೆಚ್ಚುಗೆಯಿಂದ ಸ್ಮರಿಸಿಕೊಳ್ಳುತ್ತಾರೆ.
ನಿರ್ದೇಶಕರ ಮಂಡಳಿಯ ಪರವಾಗಿ
ಸಹಿ/- ಸಹಿ/-
(ಪ್ರಕಾಶ್ ಎಸ್.ನೆಟಾಲ್ಕರ್) (ಪ್ರಕಾಶ್ ಕಲ್ಭಾವಿ)
ವ್ಯವಸ್ಥಾಪಕ ನಿರ್ದೇಶಕರು ಅಧ್ಯಕ್ಷರು
ಸ್ಥಳ: ಮಂಗಳೂರು
ಅನುಬಂಧ - ಅ
ಶಕ್ತಿ ಸಂರಕ್ಷಣೆ, ತಂತ್ರಜ್ಞಾನ ಹೀರುವಿಕೆ, ವಿದೇಶಿ ವಿನಿಮಯ ಗಳಿಕೆಗಳ ಮತ್ತು ಹೊರಹರಿವು ವಿವರಗಳು ಈ ಕೆಳಗಿನಂತಿವೆ:
ಅ) ಶಕ್ತಿ ಸಂರಕ್ಷಣೆ: ಅನ್ವಯಿಸುವುದಿಲ್ಲ
ಆ) ತಂತ್ರಜ್ಞಾನ ಹೀರುವಿಕೆ : ಇಲ್ಲ.
ಇ) ವಿದೇಶಿ ವಿನಿಮಯ ಗಳಿಕೆ ಮತ್ತು ಹೊರಹರಿವು:
ವಿದೇಶಿ ವಿನಿಮಯ ಗಳಿಕೆ: ಇಲ್ಲ.
ವಿದೇಶಿ ವಿನಿಮಯ ವ್ಯಯ: ಇಲ್ಲ.
ಅನುಬಂಧ - ಆ
ಸೆಕ್ಷನ್ 186 ಪ್ರಕಾರ ಸಾಲ, ಖಾತರಿಗಳು ಮತ್ತು ಹೂಡಿಕೆಗಳ ವಿವರ : ಅನ್ವಯಿಸುವುದಿಲ್ಲ
ಅನುಬಂಧ - ಇ
ನಮೂನೆ ಸಂಖ್ಯೆ. AOC-2
(ಕಂಪೆನಿ ಕಾಯಿದೆ ಮತ್ತು ಕಾನೂನು 8(2) ವಿಭಾಗ 134 ರ ಉಪವಿಭಾಗ (3) ಷರತ್ತು (ಹೆಚ್) ಪ್ರಕಾರ
(ಲೆಕ್ಕಗಳು) ಕಾಯಿದೆ, 2014)
ಕಂಪೆನಿ ಕಾಯಿದೆ 2013 ವಿಭಾಗ 188 ಉಪ ವಿಭಾಗ (1) ರ ಪ್ರಕಾರ ಗುತ್ತಿಗೆ/ ವ್ಯವಸ್ಥೆಗಳ ವಿವರಗಳ ಕೆಲವು ಮೂರನೇ ನಿಯಮದಂತೆ ಕೈಗೆಟಕುವ ವ್ಯವಹಾರಗಳು:
- ಗುತ್ತಿಗೆ ಅಥವಾ ವ್ಯವಸ್ಥೆ ಅಥವಾ ವ್ಯವಹಾರಗಳ ವಿವರಗಳು ಕೈಗೆಟಕುವ ವ್ಯವಸ್ಥೆ ಆಧಾರದಲ್ಲಿರುವುದಿಲ್ಲ.
ಕ್ರ. ಸಂ.
ವರದಿಗಳು
ವಿವರ
ಅ
ಸಂಬಂದಿತ ಪಕ್ಷಗಳ ಹೆಸರು ಮತ್ತು ಸಂಬಂಧ ಸ್ವರೂಪ
ಅನ್ವಯಿಸುವುದಿಲ್ಲ
ಆ
ಗುತ್ತಿಗೆ/ ವ್ಯವಸ್ಥೆ/ ವ್ಯವಹಾರಗಳ ಸ್ವರೂಪ
ಅನ್ವಯಿಸುವುದಿಲ್ಲ
ಇ
ಗುತ್ತಿಗೆ/ ವ್ಯವಸ್ಥೆ/ ವ್ಯವಹಾರಗಳ ಅವಧಿ
ಅನ್ವಯಿಸುವುದಿಲ್ಲ
ಈ
ಗುತ್ತಿಗೆ/ ವ್ಯವಸ್ಥೆ/ ವ್ಯವಹಾರಗಳ ಅವಧಿ
ಅನ್ವಯಿಸುವುದಿಲ್ಲ
ಉ
ಗುತ್ತಿಗೆ/ ವ್ಯವಸ್ಥೆ/ ವ್ಯವಹಾರಗಳ ಪ್ರಧಾನ ಷರತ್ತುಗಳು ಮೌಲ್ಯ ಸೇರಿ,ಇತರ
ಅನ್ವಯಿಸುವುದಿಲ್ಲ
ಊ
ಗುತ್ತಿಗೆ/ ವ್ಯವಸ್ಥೆ/ ವ್ಯವಹಾರಗಳ ಕರಾರಿಗೆ ಸಮರ್ಥನೆ
ಅನ್ವಯಿಸುವುದಿಲ್ಲ
ಐ
ಮಂಡಳಿಯ ಒಪ್ಪಿಗ ದಿನಾಂಕ
ಅನ್ವಯಿಸುವುದಿಲ್ಲ
ಒ
ಸಾಮಾನ್ಯ ಸಭೆಯಲ್ಲಿ ಕಾಯಿದೆ 188 ರ ಪ್ರಕಾರ ವಿಶೇಷ ನಡವಳಿ ದಿನಾಂಕ
ಅನ್ವಯಿಸುವುದಿಲ್ಲ
- ಕೈಗೆಟಕುವ ವ್ಯವಸ್ಥೆ ಆಧಾರದಲ್ಲಿ ಗುತ್ತಿಗೆ ಅಥವಾ ವ್ಯವಸ್ಥೆ ಅಥವಾ ವ್ಯವಹಾರಗಳ ವಿವರಗಳು:
ಕ್ರ. ಸಂ.
ವರದಿಗಳು
ವಿವರ
ಅ
ಸಂಬಂದಿತ ಪಕ್ಷಗಳ ಹೆಸರು ಮತ್ತು ಸಂಬಂಧ ಸ್ವರೂಪ
ಇಲ್ಲ
ಆ
ಗುತ್ತಿಗೆ/ ವ್ಯವಸ್ಥೆ/ ವ್ಯವಹಾರಗಳ ಸ್ವರೂಪ
ಇಲ್ಲ
ಇ
ಗುತ್ತಿಗೆ/ ವ್ಯವಸ್ಥೆ/ ವ್ಯವಹಾರಗಳ ಅವಧಿ
ಇಲ್ಲ
ಈ
ಗುತ್ತಿಗೆ/ ವ್ಯವಸ್ಥೆ/ ವ್ಯವಹಾರಗಳ ಪ್ರಧಾನ ಷರತ್ತುಗಳು ಮೌಲ್ಯ ಸೇರಿ,ಇತರ
ಇಲ್ಲ
ಉ
ಮಂಡಳಿಯ ಒಪ್ಪಿಗ ದಿನಾಂಕ
ಅನ್ವಯಿಸುವುದಿಲ್ಲ
ಊ
ಮುಂಚಿತವಾಗಿ ಪಾವತಿಸಿದ ಹಣ , ಇತರ
ಇಲ್ಲ
ಅನುಬಂಧ - ಈ
ನಮೂನೆ ಸಂಖ್ಯೆ. MGT 9
ವಾರ್ಷಿಕ ಸಲ್ಲಿಕೆಯ ಉದ್ಡ್ರತಭಾಗ
ಆರ್ಥಿಕ ವರ್ಷ ಕೊನೆಗೊಂಡ ದಿನಾಂಕ 31-03-2019
2013 ಕಂಪೆನಿ ಕಾನೂನು ಮತ್ತು ಕಾಯಿದೆ 12(1) ಕಂಪೆನಿ (ನಿರ್ವಹಣೆ ಮತ್ತು ಆಡಳಿತ) ಕಾಯ್ದೆ 2014 ರ ಪ್ರಕಾರ
I ನೋಂದಣಿ ಮತ್ತು ಇತರ ವಿವರಗಳು:
1. |
CIN |
U01133KA1978SGC003280 |
ನೋಂದಣಿ ದಿನಾಂಕ |
14.02.1978 |
|
ಕಂಪೆನಿಯ ಹೆಸರು |
ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ |
|
ಕಂಪೆನಿಯ ವರ್ಗ/ ಉಪ ವರ್ಗ |
ಸರಕಾರಿ ಸಂಸ್ಥೆ |
|
ನೋಂದಾಯಿತ ಕಛೇರಿ ವಿಳಾಸ ಮತ್ತು |
23, 24 ಅಬ್ಬಕ್ಕ ನಗರ, 1ನೇ ಮುಖ್ಯರಸ್ತೆ, |
|
ಕಂಪೆನಿಗಳ ಪಟ್ಟಿಯಲ್ಲಿ ದಾಖಲಾಗಿದೆಯೇ? |
ಇಲ್ಲ. |
|
ನೋಂದಾವಣೆ ಮತ್ತು ಟ್ರಾನ್ಸ್‍ಫರ್ |
ಅನ್ವಯಿಸುವುದಿಲ್ಲ. |
II. ಕಂಪೆನಿಯ ಪ್ರಾಮುಖ್ಯ ವ್ಯಾಪಾರ ಚಟುವಟಿಕೆಗಳು:
(ಕಂಪೆನಿಯ ಒಟ್ಟು ವ್ಯವಹಾರದಲ್ಲಿ 10% ಹೆಚ್ಚು ವ್ಯಪಾರ ವಹಿವಾಟು ಮಾಡುವ ವ್ಯವಹಾರದ ಎಲ್ಲಾ ಚಟುವಟಿಕೆಗಳನ್ನು ತಿಳಿಸುವುದು)
ಕ್ರ.ಸಂ. |
ಪ್ರಾಮುಖ್ಯ ವಸ್ತುವಿನ ಹೆಸರು ಮತ್ತು ವಿವರ/ ಸೇವೆ |
ವಸ್ತು / ಸೇವೆಯ NIC Code |
ಕಂಪೆನಿಯ ಒಟ್ಟು |
1 |
ಗೇರು ತೋಟಗಳನ್ನು ಅಭಿವೃದ್ಧಿ |
01133 |
100 |
III. ಹಿಡುವಳಿ ಸಂಸ್ಥೆ, ಅಂಗ ಸಂಸ್ಥೆ ಮತ್ತು ಸಹಸದಸ್ಯ ಕಂಪೆನಿಗಳ ವಿವರಗಳು:
ಒಟ್ಟು ವ್ಯವಹಾರದಲ್ಲಿ 10% ಅಥವಾ ಹೆಚ್ಚಿನ ವ್ಯವಹಾರದ ಕಂಪೆನಿಗಳ ವಿವರ - ಇಲ್ಲ.
VI. ಪಾಲುದಾರರ ಹಿಡುವಳಿ ವಿಧಾನ (ಷೇರು ಬಂಡವಾಳ ವರ್ಗೀಕರಣ):
ಒಟ್ಟು ಬಂಡವಾಳದ ಶೇಕಡಾವಾರು ವಿವರ:
ವರ್ಗೀಕರಣ ನೆಲೆಯಲ್ಲಿ ಷೇರು ಹಿಡುವಳಿ
ಷೇರುದಾರರ |
ವರ್ಷದ ಆರಂಭದಲ್ಲಿರುವ ಒಟ್ಟು ಷೇರು |
ವರ್ಷದ ಕೊನೆಯಲ್ಲಿರುವ ಒಟ್ಟು ಷೇರು |
ಪ್ರಸಕ್ತ |
||||||
ಎ) ಪ್ರವರ್ತಕರು |
ಡಿಮ್ಯಾಟ್ |
ವಸ್ತು |
ಒಟ್ಟು |
ಒಟ್ಟು |
ಡಿಮ್ಯಾಟ್ |
ವಸ್ತು |
ಒಟ್ಟು |
ಒಟ್ಟು |
|
(1)ಭಾರತೀಯರು |
|
|
|
|
|
|
|
|
|
ಎ) ವೈಯಕ್ತಿಕ/ |
NIL |
0 |
0 |
0 |
NIL |
0 |
0 |
0 |
0 |
ಬಿ) ಕೇಂದ್ರ ಸರಕಾರ |
NIL |
4400 |
4400 |
05.80 |
NIL |
4400 |
4400 |
05.80 |
0 |
ಸಿ) ರಾಜ್ಯ ಸರಕಾರ |
NIL |
71503 |
71503 |
94.20 |
NIL |
71503 |
71503 |
94.20 |
0 |
ಡಿ) ಸಂಸ್ಥೆ ನಿಗಮ |
NIL |
0 |
0 |
0 |
NIL |
0 |
0 |
0 |
0 |
ಎ) ಬ್ಯಾಂಕುಗಳು / ವಿದೇಶಿ ಸಂಸ್ಥೆಗಳು |
NIL |
0 |
0 |
0 |
NIL |
0 |
0 |
0 |
0 |
ಎಫ್) ಇತರ |
NIL |
0 |
0 |
0 |
NIL |
0 |
0 |
0 |
0 |
ಪ್ರವರ್ತಕರ ಒಟ್ಟು |
NIL |
75903 |
75903 |
100 |
NIL |
75905 |
75903 |
100 |
0 |
|
|
|
|
|
|
|
|
|
|
ಬಿ) ಸಾರ್ವಜನಿಕ |
NIL |
- |
- |
- |
NIL |
- |
- |
- |
- |
ಉಪ ಮೊತ್ತ |
0 |
0 |
0 |
0 |
0 |
0 |
0 |
0 |
0 |
|
|
|
|
|
|
|
|
|
|
2. ಅಸಂಸ್ಥೆ |
NIL |
- |
- |
- |
NIL |
- |
- |
- |
- |
ಉಪ ಮೊತ್ತ |
0 |
0 |
0 |
0 |
0 |
0 |
0 |
0 |
0 |
ಒಟ್ಟು ಸಾರ್ವಜನಿಕ |
0 |
0 |
0 |
0 |
0 |
0 |
0 |
0 |
0 |
ಸಿ. ಕಸ್ಟೋಡಿಯನ್ |
0 |
0 |
0 |
0 |
0 |
0 |
0 |
0 |
0 |
ಒಟ್ಟು ಮೊತ್ತ |
NIL |
75903 |
75903 |
100 |
NIL |
75903 |
75903 |
100 |
0 |
ಬಿ) ಪ್ರವರ್ತಕರ ಷೇರುಗಳು:
ಕ್ರ.ಸಂ. |
ಷೇರುದಾರರ |
ವರ್ಷದ ಆರಂಭದಲ್ಲಿರುವ ಒಟ್ಟು ಷೇರುಗಳು |
ವರ್ಷದ ಕೊನೆಯಲ್ಲಿರುವ ಒಟ್ಟು ಷೇರುಗಳು |
ಪ್ರಸಕ್ತ |
||||
|
|
ಷೇರುಗಳ |
ಕಂಪೆನಿಯ |
ಅಡವು/ |
ಷೇರುಗಳ |
ಕಂಪೆನಿಯ |
ಅಡವು/ |
|
1 |
ಭಾರತ |
4400 |
05.80% |
0 |
4400 |
05.80% |
0 |
- |
2 |
ಕರ್ನಾಟಕ |
71503 |
94.20% |
0 |
71503 |
94.20% |
0 |
- |
3 |
75903 |
100.00 |
0 |
75903 |
100.00 |
0 |
- |
ಸಿ) ಪ್ರವರ್ತಕರ ಷೇರುಗಳ ಬದಾವಣೆ (ಯಾವುದೇ ಬದಲಾವಣೆ ಇಲ್ಲದಿದ್ದರೆ, ದಯವಿಟ್ಟು ಸೂಚಿಸಿ) - ಷೇರುಗಳಲ್ಲಿ ಯಾವುದೇ ಬದಲಾವಣೆ ಇಲ.
ಕ್ರ.ಸಂ. |
ವಿವರಗಳು |
ವರ್ಷದ ಆರಂಭದಲ್ಲಿರುವ ಒಟ್ಟು |
ಪ್ರಸಕ್ತ ವರ್ಷದ ಸಂಚಿತ ಷೇರುಗಳು |
||
ಷೇರುಗಳ |
ಕಂಪೆನಿಯ ಒಟ್ಟು |
ಷೇರುಗಳ |
ಕಂಪೆನಿಯ ಒಟ್ಟು |
||
|
|
|
|
|
|
|
ವರ್ಷದ ಆರಂಭದಲ್ಲಿ |
- |
- |
- |
- |
|
ದಿನವಹಿ ಏರಿಕೆ/ ಪ್ರಸಕ್ತ ವರ್ಷದಲ್ಲಿ |
- |
- |
- |
- |
|
ವರ್ಷದ ಕೊನೆಯಲ್ಲಿ |
- |
- |
- |
- |
ಡಿ) ಪ್ರಮುಖ ಹತ್ತು ಷೇರುಗಳ ಮಾದರಿ:
(ನಿರ್ದೇಶಕರು, ಪ್ರವರ್ತಕರು ಮತ್ತು GDRs ಮತ್ತು ADRsಹೊಂದಿರುವವರ ಹೊರತು ): ಇಲ್ಲ.
ಇ) ನಿರ್ದೇಶಕರ ಷೇರುಗಳು ಮತ್ತು ಬಹುಮುಖ್ಯ ನಿರ್ವಾಹಕ ಸಿಬ್ಬಂದಿಗಳು : ಇಲ್ಲ.
V)ಋಣ: ಸಂಚಿತ ಆದರೆ ಪಾವತಿಯಾಗಲು ಇಲ್ಲದ ಕಂಪೆನಿಯ ಋಣ: ಇಲ್ಲ.
VI. ನಿರ್ದೇಶಕರ ಸಂಭಾವನೆ ಮತ್ತು ಬಹುಮುಖ್ಯ ನಿರ್ವಾಹಕ ಸಿಬ್ಬಂದಿಗಳು : ಇಲ್ಲ.
VII. ದಂಡ/ ಶಿಕ್ಷೆ/ ಅಪರಾಧಗಳನ್ನು ಸಂಯೋಜಿಸುವುದು : ಅನ್ವಯಿಸುವುದಿಲ್ಲ.
ನಿರ್ದೇಶಕರ ಮಂಡಳಿಯ ಪರವಾಗಿ
ಸಹಿ/- ಸಹಿ/-
(ಪ್ರಕಾಶ್ ಎಸ್.ನೆಟಾಲ್ಕರ್) (ಪ್ರಕಾಶ್ ಕಲ್ಭಾವಿ)
ವ್ಯವಸ್ಥಾಪಕ ನಿರ್ದೇಶಕರು ಅಧ್ಯಕ್ಷರು
ಸ್ಥಳ: ಮಂಗಳೂರು
ಅನುಬಂಧ - ಉ
ನಮೂನೆ ಸಂಖ್ಯೆ. AOC-I
(ವಿಭಾಗ 129 ಉಪ ವಿಭಾಗ (3) ಷರತ್ತು 7 ಮೊದಲ ಅವಕಾಶ ಅನುಸಾರವಾಗಿ (ಲೆಕ್ಕೆಗಳು) ಕಾಯಿದೆ, 2014)
ಅಂಗಸಂಸ್ಥೆಗಳು / ಸಹಾಯಕ ಕಂಪೆನಿಗಳು / ಜಂಟಿ-ಉದ್ಯಮಗಳು ಆರ್ಥಿಕ ಹೇಳಿಕೆಯ ಪ್ರಮುಖ ಅಂಶಗಳನ್ನು ಹೊಂದಿರುವ ವಿವರಣಾ ಪಟ್ಟಿ
ಭಾಗ 'ಎ': ಅಂಗಸಂಸ್ಥೆಗಳು
ಅನ್ವಯಿಸುವುದಿಲ್ಲ
(ಪ್ರತೀ ಅಂಗಸಂಸ್ಠೆಯ ಮಾಹಿತಿಯನ್ನು ರೂ ........................... ಯಲ್ಲಿ ಪ್ರಸ್ತುತ ಪಡಿಸುವುದು)
ಭಾಗ 'ಬಿ': ಸಹಾಯಕ ಮತ್ತು ಜಂಟಿ ಸಹಯೋಗಗಳು
ಕಂಪೆನಿ ಕಾಯಿದೆ 2013 ವಿಭಾಗ 129(3) ರ ಅನುಸಾರ ಸಹಾಯಕ ಮತ್ತು ಜಂಟಿ ಸಹಯೋಗಗಳ ವಿವರಣಾ ಪಟ್ಟಿ
ಅನ್ವಯಿಸುವುದಿಲ್ಲ
ಟಿಪ್ಪಣಿ: ತುಲನ ಪತ್ರವನ್ನು ಧ್ರಡೀಕರಿಸಿದಂತೆ, ಈ ನಮೂನೆಯನ್ನು ಕೂಡಾ ಅದೇ ರೀತಿಯಲ್ಲಿ ಧ್ರಡೀಕರಿಸಲಾಗಿದೆ
ನಿರ್ದೇಶಕರ ಮಂಡಳಿಯ ಪರವಾಗಿ
ಸಹಿ/- ಸಹಿ/-
(ಪ್ರಕಾಶ್ ಎಸ್.ನೆಟಾಲ್ಕರ್) (ಪ್ರಕಾಶ್ ಕಲ್ಭಾವಿ)
ವ್ಯವಸ್ಥಾಪಕ ನಿರ್ದೇಶಕರು ಅಧ್ಯಕ್ಷರು
ಸ್ಥಳ: ಮಂಗಳೂರು