ನಾಗರಿಕ ಸನ್ನದು

ಪೀಠಿಕೆ:

ಕರ್ನಾಟಕ ಗೇರು ಅಭಿವೃದ್ಧಿ ನಿಗಮವು 1978 ಕಂಪೆನಿ ಕಾಯ್ದೆ 1956 ಕ್ಕೆ ಒಳಪಟ್ಟು ಸ್ಥಾಪಿಸಿದೆ. ಹಾಗೂ ಗೇರು ಬೆಳೆಯನ್ನು ಅರಣ್ಯ ಇಲಾಖೆಯಿಂದ ಹಸ್ತಾಂತರಿಸಿದ ಅರಣ್ಯ ಪ್ರದೇಶದಲ್ಲಿ ಬೆಳೆಸಿ ಗೇರು ಬೆಳೆಯ ಕ್ಷೇತ್ರವನ್ನು ವೃದ್ಧಿಸುವುದು ಆಗಿರುತ್ತದೆ. ಅಧಿಕೃತ ಪಾಲು ಬಂಡವಾಳ ರೂ.1000 ಲಕ್ಷ ಮತ್ತು ಸಂದಾಯ ಈಕ್ವಿಟಿ ಷೇರು ರೂ.759.03 ಲಕ್ಷದಲ್ಲಿ ರೂ.44 ಲಕ್ಷ ಕೇಂದ್ರ ಸರಕಾರದ ಅಧೀನದಲ್ಲಿ 4400 ಈಕ್ವಿಟಿ ಷೇರು ರೂಪದಲ್ಲಿ ಹಾಗೂ ಉಳಿದ 715.03 ಲಕ್ಷವು ಕರ್ನಾಟಕ ಸರಕಾರದ ಅಧೀನದಲ್ಲಿ 71503 ಈಕ್ವಿಟಿ ಬಂಡವಾಳವಾಗಿರುತ್ತದೆ. 1979 ರಲ್ಲಿ ರಕ್ಷಿತಾರಣ್ಯದಲ್ಲಿ ಬೆಳೆಸಿದ ಗೇರು ಕ್ಷೇತ್ರವಾಗಿ 8000 ಹೆಕ್ಟೇರು ವಿಸ್ತೀರ್ಣವನ್ನು ಹಸ್ತಾಂತರಿಸಿರುತ್ತದೆ. ಹಾಗೂ 1993 ರಲ್ಲಿ 5000 ಹೆಕ್ಟೇರು ರಕ್ಷಿತಾರಣ್ಯದಲ್ಲಿರುವ ಗೇರು ಕ್ಷೇತ್ರವನ್ನು ಸಾಮ್ಯ ಬಂಡವಾಳವಾಗಿ ಹಸ್ತಾಂತರಿಸಿರುತ್ತದೆ. ಅದೂ ಅಲ್ಲದೆ 1993 ರಿಂದ ರಕ್ಷಿತಾರಣ್ಯದಲ್ಲಿರುವ ಗೇರು ಕ್ಷೇತ್ರವಾದ 11,174.95 ಹೆಕ್ಟೇರನ್ನು ಗೇಣಿ ರೂಪದಲ್ಲಿ ಹಸ್ತಾಂತರಿಸಿರುತ್ತದೆ. 1982-1987 ರ ಅವಧಿಯಲ್ಲಿ ರಕ್ಷಿತಾರಣ್ಯವಾದ 2860.78 ಹೆಕ್ಟೇರು ಅರಣ್ಯ ಕ್ಷೇತ್ರವನ್ನು ಗೇರು ಬೆಳೆಸಲು ಗೇಣಿ ಆಧಾರದಲ್ಲಿ ಹಸ್ತಾಂತರಿಸಿರುತ್ತದೆ. ನಿಗಮ 2017-18 ರ ಅವಧಿಯ ವರೆಗೆ 25632.62 ಹೆಕ್ಟೇರು ಗೇರು ಕ್ಷೇತ್ರವನ್ನು ಹೊಂದಿದ್ದು ಇದರಲ್ಲಿ 12,724.43 ಹೆಕ್ಟೇರು ಸಾಮ್ಯ ಬಂಡವಾಳ ಮತ್ತು ಉಳಿದ 12,908.19 ಹೆಕ್ಟೇರು ಕ್ಷೇತ್ರವು ಗೇಣಿ ಪ್ರದೇಶವಾಗಿರುತ್ತದೆ.

I. ದೂರದೃಷ್ಟಿ ಮತ್ತು ಮನೋದ್ದೇಶದ ತಖ್ತೆ:

 1. ಕರ್ನಾಟಕ ರಾಜ್ಯದ ರಕ್ಷಿತಾರಣ್ಯದಲ್ಲಿ ಉತ್ತಮ ಇಳುವರಿ ಬರುವ ಗೇರು ಕಸಿ ಗಿಡಗಳ ನೆಡುತೋಪುಗಳನ್ನು ಬೆಳೆಸುವುದು.
 2. ಉತ್ತಮ ಇಳುವರಿ ಕೊಡುವ ಕಸಿ ಗೇರು ಗಿಡಗಳನ್ನು ತಯಾರಿಸಿ ಮಾರಾಟಕ್ಕೆ/ ರೈತರಿಗೆ /ಜನ ಸಾಮಾನ್ಯರಿಗೆ ಹಂಚುವುದು.
 3. ವಿವಿಧ ತಳಿಯ ಉತ್ತಮ ಇಳುವರಿ ಕೊಡುವ ಗೇರು ಗಿಡಗಳನ್ನು ಬೆಳೆಸಲು ಕಸಿಕಡ್ಡಿ ಕ್ಷೇತ್ರವನ್ನು ನಿರ್ಮಿಸುವುದು.
 4. ಉತ್ತಮ ಇಳುವರಿ ಕೊಡುವ ಗೇರು ಕ್ಷೇತ್ರವನ್ನು ಮತ್ತು ಕಚ್ಛಾ ಗೇರು ಬೀಜದ ಉತ್ಪತ್ತಿಯನ್ನು ರಾಜ್ಯದಲ್ಲಿ ಹೆಚ್ಚಿಸುವುದು.
 5. ಗೇರು ಬೆಳೆಯ ಅರಿವನ್ನು ಸಾರ್ವಜನಿಕರಿಗೆ ಪ್ರಸಾರ ಮಾಡುವುದು ಹಾಗೂ ಗೇರು ಬೆಳೆಯ ಅಭಿವೃದ್ಧಿಯ ಬಗ್ಗೆ ಸಮಾಲೋಚನೆ ಸೇವೆ ಒದಗಿಸುವುದು.
 6. ರಾಜ್ಯ ಮತ್ತು ಕೇಂದ್ರ ಸರಕಾರದ ಗೇರು ಕೃಷಿಯ ಬಗ್ಗೆ ವಿವಿಧ ಯೋಜನೆಯನ್ನು ಅನುಷ್ಠಾನಗೊಳಿಸುವುದು. 
 7. ಗೇರು ಕೃಷಿಯ ಬಗ್ಗೆ ಹೊಸ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ರೈತರಿಗೆ ಒದಗಿಸುವುದು ಮತ್ತು ಮಾದರಿ ಗೇರು ತೋಟವನ್ನು ನಿರ್ಮಿಸುವುದು.
 8. ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಗೇರು ಸಂಶೋದನೆಯನ್ನು ನಡೆಸಿ ರಫ್ತು ಮಾಡುವ ಬಗ್ಗೆ ದಾರಿ ಹುಡುಕುವುದು.

II. ಕಂಪೆನಿಯ ವ್ಯವಹಾರದ ವಿವರಣೆ:

 1. ಗೇರು ಫಲೋತ್ಫನ್ನಗಳನ್ನು ಮಾರಾಟ ಮತ್ತು ಹರಾಜು ಮುಖಾಂತರ ವಿಲೇವಾರಿ ಮಾಡುವುದು.
 1. ಉತ್ತಮ ಇಳುವರಿಯ ಕಸಿ ಗೇರು ಗಿಡಗಳನ್ನು ಬೆಳೆಸುವುದು ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುವುದು.
 1. ಟೆಂಡರು/ ಹರಾಜು ಮುಖಾಂತರ ಗುಂಡಿ ತೆಗೆಯುವುದು.
 1. ಗೇರು ಕಸಿ ಗಿಡ ಬೆಳೆಸಲು ಬೇಕಾಗುವ ರಬ್ಬರೆ ಚೀಲ/ ಕಚ್ಛಾಗೇರು/ ಕೆಂಪು ಮಣ್ಣು/ ಉಸುಕು ಮತ್ತು ಗೊಬ್ಬರವನ್ನು ಪಡೆಯುವುದು.
 1. ಸಾರಜನಕ ರಂಜಕ ಗೊಬ್ಬರ/ ಹಟ್ಟಿ ಗೊಬ್ಬರ/ ಕೀಟನಾಶಕಗಳನ್ನು ಸಂಗ್ರಹಿಸುವುದು.

III. ಬಳಕೆದಾರ/ ಕಕ್ಷಿದಾರರ ವಿವರ:

 1. ಟೆಂಡರು/ಹರಾಜಿನಲ್ಲಿ ಭಾಗವಹಿಸುವ ಸಾರ್ವಜನಿಕರು ಮತ್ತು ಅಧಿಕ ಇಳುವರಿ ಕೊಡುವ ಕಸಿ ಗೇರು ಗಿಡಗಳನ್ನು ಖರೀದಿಸುವ ಬಳಕೆದಾರ.
 1. ದಕ್ಷಿಣ ಕನ್ನಡ/ ಉತ್ತರ ಕನ್ನಡ/ ಉಡುಪಿ/ ಶಿವಮೊಗ್ಗ ಜಿಲ್ಲೆಗಳಲ್ಲಿ ಗ್ರಾಹಕರಿರುತ್ತಾರೆ.

IV. ನಾಗರೀಕರಿಗೆ ಒದಗಿಸುವ ಸೇವೆ/ ಕಕ್ಷಿದಾರರಿಗೆ ಕಾಲಮಿತಿಯಲ್ಲಿನ ವಿವರಣೆ:

 1. ಗೇರು ಫಲೋತ್ಫನ್ನಗಳನ್ನು ಟೆಂಡರು/ ಹರಾಜು ಮಾಡುವುದರಿಂದ ಮತ್ತು ಗುಂಡಿಗಳನ್ನು ತೆಗೆಯುವ ಗುತ್ತಿಗೆದಾರರಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಉತ್ಪತ್ತಿ ಆಗುವುದು.
 1. ಗೇರು ತೋಟಕ್ಕೆ ಗೊಬ್ಬರ ಒದಗಿಸುವುದು, ಕಳೆ ಕೀಳುವುದು/ ಮಣ್ಣು ಕೆಲಸ/ ಬೆಂಕಿಬೆರಿ ಕೆಲಸಗಳ ಗೇರು ತೋಟವನ್ನು ಉತ್ತಮ ಸ್ಥಿತಿಯಲ್ಲಿ ಇರಿಸುವುದಲ್ಲದೆ ಉದ್ಯೋಗ ಉತ್ಪತ್ತಿ ಆಗುವುದು.
 1. ಉತ್ತಮ ತಳಿಯ ಗೇರು ಗಿಡಗಳ ಉತ್ಪತ್ತಿ ಮತ್ತು ನ್ಯಾಯಯುತವಾದ ಬೆಲೆಗೆ ಮಾರಾಟ ಮಾಡುವುದು.

V. ಕುಂದುಕೊರತೆ ಪರಿಹಾರದ ಯಾಂತ್ರಿಕ ಸಂಯೋಜನೆಯ ವಿವರಗಳು:

ವಿಭಾಗೀಯ ವ್ಯವಸ್ಥಾಪಕರ ಮಟ್ಟದಲ್ಲಿಯೇ ಪಡೆಯಲ್ಪಟ್ಟ ಕುಂದು ಕೊರತೆಗಳೇನಾದರು ಇದ್ದಲ್ಲಿ, ವಿಭಾಗೀಯ ವ್ಯವಸ್ಥಾಪಕರು ಪರಿಹಾರ ಕಂಡುಕೊಳ್ಳುವುದು ಮತ್ತು ವಿಭಾಗೀಯ ವ್ಯವಸ್ಥಾಪಕರ ಮಟ್ಟದಲ್ಲಿ ಕುಂದು ಕೊರತೆಗಳ ಪರಿಹಾರ ಕಾಣದಿದ್ದಲ್ಲಿ, ಅಂತಹ ವಿಚಾರಗಳನ್ನು ಕೇಂದ್ರ ಕಛೇರಿಗೆ ಕಳುಹಿಸುವುದು ಮತ್ತು ಕಾನೂನು ಪ್ರಕಾರ ಕುಂದುಕೊರತೆಗಳಿಗೆ ವ್ಯವಸ್ಥಾಪಕ ನಿರ್ದೇಶಕರು / ಸಾರ್ವತ್ರಿಕ ವ್ಯವಸ್ಥಾಪಕರು ಪರಿಹಾರ ನೀಡುವುದು. ನಿಗಮದ ವಿಭಾಗೀಯ ಕಛೇರಿಯನ್ನು ಸಾರ್ವಜನಿಕರು ಸಂಪರ್ಕಿಸಬಹುದು ಹಾಗೂ ಅವರ ವಿಳಾಸ, ದೂರವಾಣಿ ಸಂಖ್ಯೆಗಳು ಮಾರಾಟ ಅಧಿಸೂಚನೆಯಲ್ಲಿ ಹಾಗೂ ನಿಗಮದ ಅಧಿಕೃತ ಜಾಲತಾಣದಲ್ಲಿ ಅಥವಾ ಮಿಂಚು ಅಂಚೆಯ ಮುಖಾಂತರ ಸಂಪರ್ಕಿಸುವುದು. ಮಾಹಿತಿ ಹಕ್ಕು ಅಧಿನಿಯಮ 2005 ರಲ್ಲಿ ಪ್ರಕಟಣೆ ಮಾಡÀಲಾಗಿದೆ ಹಾಗೂ ಅದು ನಿಗಮದ ಜಾಲತಾಣ www.kcdccashew.com ಲ್ಲಿ ಲಭ್ಯವಿರುವುದು.

VI. ನಾಗರೀಕ /ಕಕ್ಷಿದಾರರ ನಿರೀಕ್ಷೆಗಳು :

ಕಕ್ಷಿದಾರರನ್ನು ಉತ್ತಮ ಗುಣಮಟ್ಟದ ಕಸಿ ಗೇರುಗಿಡ ಮತ್ತು ಉತ್ತಮ ನೆಡುತೋಪು ನಿರ್ವಹಣೆಯನ್ನು ಮತ್ತು ಅಧಿಕ ಅದಾಯ ಮತ್ತು ಹಣಕ್ಕೆ ಉತ್ತಮ ಮೊತ್ತವನ್ನು ಅಪೇಕ್ಷಿಸುತ್ತಾನೆ.

ಕಾರ್ಯಭಾರ ಪಡೆ ರಚನೆ:

            ಕೇಂದ್ರ ಸರಕಾರದ ನಾಗರೀಕರ ಪಾತ್ರದ ಬಗ್ಗೆ ದಿಕ್ಸೂಚಿಯನ್ನು ಈ ಕೆಳಗಿನಂತೆ ಕೆಸಿಡಿಸಿಯು ಮೇಲ್ವಿಚಾರಣೆಯನ್ನು ಸ್ಥಾಪಿಸಿದೆ.

i) Representatives from Top Management:

 1. ಮೇಲಿನ ಹಂತದ ವ್ಯವಸ್ಥಾಪಕರ ಪ್ರತಿನಿಧಿಗಳು:
  ದೂ.ಸಂ.: 08254 265236; e-mail:kcdckpr@gmail.com
 2. ವಿಭಾಗೀಯ ವ್ಯವಸ್ಥಾಪಕರು, ಕ.ಗೇ.ಅ.ನಿ., ಪುತ್ತೂರು.
  ದೂ.ಸಂ.: 08251 230683; e-mail:kcdcputtur.puttur@gmail.com

ii) ಮಧ್ಯದ ಹಂತದ ವ್ಯವಸ್ಥಾಪಕರ ಪ್ರತಿನಿಧಿಗಳು:

 1. ನೆಡುತೋಪು ಅಧೀಕ್ಷಕರು, ಕೆಸಿಡಿಸಿ, ಕಾರ್ಕಳ ಶಾಖೆ, ಮೂಡಬಿದ್ರೆ ವಿಭಾಗ.
 2. ಕಛೇರಿ ವ್ಯವಸ್ಥಾಪಕರು, ಕೆ.ಸಿ.ಡಿ.ಸಿ. ಕೇಂದ್ರ ಕಛೇರಿ, ಮಂಗಳೂರು.
 3. ನೆಡುತೋಪು ಅಧೀಕ್ಷಕರು, ಕೆಸಿಡಿಸಿ, ಕುಂತೂರು ಶಾಖೆ, ಪುತ್ತೂರು ವಿಭಾಗ.

iii) ಕೊನೆಯ ಹಂತದ ಸಿಬ್ಬಂದಿಗಳ ಪ್ರತಿನಿಧಿಗಳು:

 1. ನೆಡುತೋಪು ಅಧೀಕ್ಷಕರು, ಕೆಸಿಡಿಸಿ, ಭಟ್ಕಳ ಶಾಖೆ, ಕುಮಟಾ ವಿಭಾಗ.
 2. ನೆಡುತೋಪು ಅಧೀಕ್ಷಕರು, ಕೆಸಿಡಿಸಿ, ಬೈಂದೂರು ಶಾಖೆ, ಕುಂದಾಪುರ ವಿಭಾಗ.
 3. ನೆಡುತೋಪು ಅಧೀಕ್ಷಕರು, ಕೆಸಿಡಿಸಿ, ಬೆಳ್ತಂಗಡಿ ಶಾಖೆ, ಮೂಡಬಿದ್ರೆ ವಿಭಾಗ.

iv) ನೌಕರರ ಸಂಘದಿಂದ ಪ್ರತಿನಿಧಿಸುವವರು :

 1. ಅಧ್ಯಕ್ಷರು, ಕ.ಗೇ.ಅ.ನಿ. ನೌಕರರ ಸಂಘ.

v) ಕಕ್ಷಿದಾರ/ ಗ್ರಾಹಕರಿಂದ ಪ್ರತಿನಿದಿಸುವವರು:

 1. ಶ್ರೀ. ಎನ್. ವಿಶ್ವನಾಥ ರೈ, s/o. ದೂಮಣ್ಣ ರೈ, ಕಲೆಂಜಿ ಮನೆ, ಸುಳ್ಯ ತಾಲೂಕು.
 2. ಶ್ರೀ.ಅಬ್ದುಲ್ ಕರೀಮ್ s/o. ಅಬ್ದುಲ್ ಖಾದರ್, ಕಾಣಿಯೂರು, ಪುತ್ತೂರು ತಾಲೂಕು.
 3. ಶ್ರೀ. ಕೃಷ್ಣಪ್ಪ ಪೂಜಾರಿ, s/o. ಕುಕ್ರ ಪೂಜಾರಿ, ಮೂಡಬಿದ್ರೆ.
 4. ಶ್ರೀ. ಪರಮೇಶ್ವರ ಟಿ. ನಾಯಕರ, ಮೂಡ್‍ಕಣಿ, ಹೊನ್ನಾವರ ತಾಲೂಕು.
 5. ಶ್ರೀ. ಯು. ರಾಜೀವ ಭಟ್, s/o. ವಾಮನ ಭಟ್, ನಂದನವನ, ಕೆರೆಗಲ್ ಅಂಚೆ, ಕೆರೆಗಲ್, ಕುಂದಾಪುರ.

ಸಾರ್ವತ್ರಿಕ ವ್ಯವಸ್ಥಾಪಕರು, ಕ.ಗೇ.ಅ.ನಿ., ಮಂಗಳೂರು, ಇವರು ಕಾರ್ಯಪಡೆಯ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.

                                                                                                ಸಹಿ/-
                                                                                  ವ್ಯವಸ್ಥಾಪಕ ನಿರ್ದೇಶಕರು,
                                                                                   ಕ.ಗೇ.ಅ.ನಿ., ಮಂಗಳೂರು.