ಗೇರು ನೆಡುತೋಪುಗಳು

ನಿಗಮವು 1982-87 ರಲ್ಲಿ 25,632.62 ಹೆಕ್ಟೇರು ಭೂಮಿಯನ್ನು ಹೊಂದಿರುತ್ತದೆ. ನಿಗಮವು 1992-93 ರಿಂದ 2017-18 ರ ವರೆಗೆ 3714 ಹೆ. ಗೇರು ನೆಡುತೋಪಿನಲ್ಲಿ ಕಸಿ ಗೇರು ಬೆಳೆಯನ್ನು ಬೆಳೆಸಲಾಗಿದೆ. ನಿಗಮವು 12,677.50 ಹೆಕ್ಟೇರು ಗೇರು ನೆಡುತೋಪಿನಲ್ಲಿ ಅಧಿಕ ಇಳುವರಿ ಬರುವ ವಿವಿಧ ಗೇರು ತಳಿಯನ್ನು ಬೆಳೆಸಲಾಗಿದೆ. ಈ ಅಧಿಕ ಇಳುವರಿಯ ವಿವಿಧ ಕಸಿ ಗೇರು ಗಿಡಗಳ ಸುತ್ತ ಕಳೆ ತೆಗೆಯುವುದು, ಮಣ್ಣಿನ ಕೆಲಸ ಮತ್ತು ಗೊಬ್ಬರ ಹಾಕುವ ಕೆಲಸವನ್ನು ನಿರ್ವಹಿಸಲಾಗಿದೆ. ಅಧಿಕ ಇಳುವರಿ ಬರುವ ಗೇರು ಗಿಡಗಳಾದ ಉಳ್ಳಾಲ- I, ಉಳ್ಳಾಲ- III, ವೆಂಗುರ್ಲಾ – Iಗಿ, ವೆಂಗುರ್ಲಾ – I, ಗೋವಾ -11/6, ರಾಷ್ಟ್ರೀಯ ಸಂಶೋಧನಾ ಗೇರು ಕೇಂದ್ರದ ಸೆಲೆಕ್ಷನ್- II, ಕೆ. 22/1, ಯು.ಎನ್.50, ಧನ ಮತ್ತು ವೃದ್ಧಾಚಲಂ– III ಗೇರು ತಳಿಗಳನ್ನು ನಿಗಮದ ನೆಡುತೋಪುಗಳಲ್ಲಿ ಬೆಳೆಸಲಾಗಿದೆ. ನಿಗಮವು 120.275 ಹೆಕ್ಟೇರು ಪ್ರದೇಶದಲ್ಲಿ ಅಧಿಕ ಇಳುವರಿ ಬರುವ ತಳಿಯ ಕ್ಲೋನಲ್ ಬ್ಯಾಂಕ್‍ಗಳನ್ನು ಗೇರು ಕಸಿ ಕಟ್ಟಲು ಬೇಕಾಗುವ ಕಸಿ ಕಡ್ಡಿಗಳನ್ನು ಪಡೆಯಲು ನಿರ್ಮಿಸಲಾಗಿದೆ. ಅಧಿಕ ಇಳುವರಿ ಬರುವ ಉತ್ತಮ ತಳಿಯ ಗಿಡಗಳಾದ ಉಳ್ಳಾಲ- I, II, III, Iಗಿ, ಎಂ.10/4, 3/7, ಗುಂಟೂರು 8/46, ತಳಿಪರಂಬ, ವೃದ್ಧಾಚಲಂ– III, ವೆಂಗುರ್ಲಾ – I, II, III, Iಗಿ, ಬಿಎಲ್‍ಎ 139/1, ರಾಷ್ಟ್ರೀಯ ಸಂಶೋಧನಾ ಗೇರು ಕೇಂದ್ರದ ಸೆಲೆಕ್ಷನ್- I, II, 3/108, ಗುಬ್ಬಿ 2/97, ಕೇರಳ 9/66, ಆಂಧ್ರ 5/23, ಕುಂದಾಪುರ 6/21, ಮೂಡಬಿದ್ರೆ, ಇಳಂತಿಲ - I, II, III, Iಗಿ ಗೋವಾ 11/6, ಕೆ. 22/1, ಯು.ಎನ್.50, ಮತ್ತು ಧನ ಗೇರು ಗಿಡಗಳು ನಿಗಮದ ಕ್ಲೋನಲ್ ಬ್ಯಾಂಕಿನಲ್ಲಿ ಲಭ್ಯವಿರುತ್ತದೆ.